Sampige Samachara
April 2010
 

ಏಪ್ರಿಲ್

ಹಳದಿ, ಕೆಂಪು, ನೇರಳೆ, ಕಿತ್ತಳೆ, ಗುಲಾಬಿ, ಬಿಳಿ ವರ್ಣಗಳಲ್ಲಿ ಸಾಲು ಸಾಲಾಗಿ ಗುಂಪು ಗುಂಪಾಗಿ ಅರಳಿ ನಿಂತ ಟ್ಯೂಲಿಪ್ ಹೂಗಳು ಮನಸ್ಸಿಗೆ ಉಲ್ಲಾಸವನ್ನು ತಂದರೆ; 
ಏಪ್ರಿಲ್ಲಿನ ಎಳೆಬಿಸಿಲು, ತೋಯುವ ಮಳೆ, ಹಾಡುವ ಹಕ್ಕಿ, ಹಾರುವ ಚಿಟ್ಟೆ, ನೀಲಾಕಾಶ, ಕಾಮನಬಿಲ್ಲು ಎಲ್ಲವೂ ಎಲ್ಲರಲ್ಲೂ ವಸಂತಾಗಮನದ ಸಂಭ್ರಮವನ್ನು ಹರಡುತ್ತದೆ."
ಏಪ್ರಿಲ್
ಟ್ಯೂಲಿಪ್ ಹೂಗಳ ಬಣ್ಣದ ಗುಂಪು 
ಸೊಗಸು ಉಲ್ಲಾಸ ಹರುಷದ ಕಂಪು 
ಚಿಲಿಪಿಲಿ ಹಾಡು ಜಿಟಿಪಿಟಿ ಮಳೆಯು
ಹಾರುವ ಚಿಟ್ಟೆ ಗಾಳಿಯು ತಿಳಿಯು
ಬಾತಿನ ಮರಿಗಳು ಹಾಕುತ ಕೇಕೆ
ಪಟಪಟ ಬಡಿದವು ಖುಶಿಯಲಿ ರೆಕ್ಕೆ

ವಾರದ ಮಟ್ಟಿಗೆ ಶಾಲೆಗೆ ರಜೆಯು
ಮಕ್ಕಳ ಸಂಭ್ರಮ ಮೀರಿತು ಮಿತಿಯು 
ಉಯ್ಯಾಲೆ ಜೋಕಾಲೆ ಜಾರುವ ಸ್ಲೈಡು 
ಈಸ್ಟರ್ ಎಗ್ಗಿನ ಹಂಟಿಗೆ ದೌಡು 

ಹರೆಯದ ಸಂಭ್ರಮ ಮುಟ್ಟಿತು ಮುಗಿಲು 
ಎಳೆಬಿಸಿಲಲಿ ಮೈ ಕಾಯಿಸಿ ಒಡ್ಡಲು 
ಪೆಟ್ಟಿಗೆ ಸೇರಿತು ಜಾಕೆಟ್ಟು ಬೂಟು
ಬೆಳಕನು ಕಂಡಿತು ಬಿಕಿನಿ ಸೂಟು 

ಝಾಡಿಸಿ ಗುಡಿಸಿ ಸಾರಿಸಿ ಒರಸಿ 
ಬೇಡದ ವಸ್ತುವ ಹೆಕ್ಕುತ ಆರಿಸಿ 
ಗಂಟನು ಕಟ್ಟಲು ಉರುಳಿತು ಮೂಟೆ
ವರುಷದ ಧೂಳಿನ ಕ್ಲೀನಿಂಗ್ ಭರಾಟೆ

ಮೆತ್ತನೆ ಹಸಿರಿನ ಹಾಸಿನ ಹುಲ್ಲು 
ವಸಂತ ಹಾಸಿದ ಆಹ್ ಮಕಮಲ್ಲು 
ಮರದಲೂ ರಂಗಿನ ರಾಗದ ಗುಲ್ಲು 
ಬಾನಲಿ ಮೂಡಿತು ಕಾಮನ ಬಿಲ್ಲು 

 -ಸವಿತಾ ರವಿಶಂಕರ್ ಮಾರ್ಚ್ ೨೮ ೨೦೧೦
(Source: Savitha Ravishankar)

ಚುಟಕಗಳು(Chutaka Column)

ದಿನಕರನ ಚುಟುಕ
ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು
ಕೇಳಿದನು:ದೇಸಾಯಿ, ಹೇಗಿದ್ದಿ ನೀನು?
ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು
ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು
(Source: Dinakara Desai)

ವಚನಗಳು (Vachana Column)

ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಳಿಲ್ಲ                                                No one knows everything. The learned are few. 
ಬಲವಿಲ್ಲ ಬಲ್ಲವರಿದ್ದು ಸಾಹಿತ್ಯ                                                       There is no guarantee that the smart bring wisdom.
ಬಲವಿಲ್ಲ ಬಲ್ಲವರಿದ್ದು ಸಾಹಿತ್ಯ||                                                      Knowledge is not available for all.

(Source: Sarvgna collections)

ಅಡುಗೆಮನೆ (Karnataka Kitchen)

Recipe: Ginger Tambuli
Ingredients: 
Red Chilly - 1-2
Cumin seed - 1 tbsp
Fresh coconut power - 3 tbsp
Ginger - 1 inch length
Mosaru - 1cup
Salt to taste

Preparation:
On a hot tawa roast red chillies, cumin seeds, coconut powder. Fry until cumin is roasted and coconut powder slightly changes color.
If needed, add coconut towards the end. Grind the roasted powder with ginger with half a cup water. Once well ground, add and yogurt continue blending for a minute.
Add salt, mix well and transfer to a bowl. Finally add jeera 'vaggarane' fried in 1 tsp of ghee.

Yummy Tambuli is ready to eat with rice! 
(Note : Different flavors of tambuli can be made by replacing Ginger with roasted garlic or roasted methi - Easy to make and good for digestion)

(Contributed by: Rekha Upadhyaya)


ಕರ್ನಾಟಕದ ಕಿರುನೋಟಗಳು  (Glimpses of Karnataka)

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ 08 , 1938  - ಏಪ್ರಿಲ್ 05  ,2007 )

    ತೇಜಸ್ವಿ ಚಿಕ್ಕಮಗಳೂರಿನ ಮೂಡಿಗೆರೆಯ ತಮ್ಮ ಮನೆ ನಿರುತ್ತರದಿಂದ ಬಾರದ ಲೋಕಕ್ಕೆ ನಿರ್ಗಮಿಸಿ ಈ ಏಪ್ರಿಲ್  05 ,2010  ಕ್ಕೆ ಮೂರು ವರ್ಷಗಳು. ತೇಜಸ್ವಿ  ಕನ್ನಡದ ತೇಜಸ್ಸು.

    1938 ನೇ ಇಸವಿ ಸೆಪ್ಟೆಂಬರ್ 8 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಕೆ.ವಿ.ಪುಟ್ಟಪ್ಪ(ಕುವೆಂಪು) ಹಾಗೂ ಹೇಮಾವತಿ ದಂಪತಿಗಳಿಗೆ ಜನಿಸಿದ ತೇಜಸ್ವಿಯವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪೂರ್ಣಚಂದ್ರನಂತೆ ಬೆಳಗಿದರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯೂ ಒಬ್ಬರು. ಸ್ವತಃ ಬರಹಗಾರ, ಕೃಷಿಕ, ಪರಿಸರ ಪ್ರೇಮಿ, ಸಂಶೋಧಕ, ತಂತ್ರಜ್ಞ, ಫೋಟೋಗ್ರಾಫರ್. . . ಇತ್ಯಾದಿ ಆಗಿದ್ದ ತೇಜಸ್ವಿ, ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತವಾದಿ ಆಗಿದ್ದರು.

    ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು", "ಬೃಹನ್ನಳೆ", ಇವರ ಕವನ ಸಂಕಲನಗಳು. "ಅಬಚೂರಿನ ಪೋಸ್ಟಾಫೀಸು", "ಹುಲಿಯೂರಿನ ಸರಹದ್ದು" ಇವರ ಕಥಾ ಸಂಗ್ರಹಗಳು. "ಚಿದಂಬರ ರಹಸ್ಯ", "ಕರ್ವಾಲೋ", "ಕಿರಿಗೂರಿನ ಗಯ್ಯಾಳಿಗಳು" ಇವರ ಕಾದಂಬರಿಗಳು. "ವ್ಯಕ್ತಿ ವಿಶಿಷ್ಟ ಸಿದ್ಧಾಂತ", ತೇಜಸ್ವಿ ಅವರ ಒಂದು ಚಿಂತನ ಮಂಥನ ವೈಚಾರಿಕ ಕೃತಿ. ಇವರು ತಮ್ಮ ಮಲೆನಾಡು ಜೀವನದ ಅನುಭವದಿಂದ ಬರೆದ ಕೃತಿಗಳು 'ಪರಿಸರದ ಕಥೆ' ಮತ್ತು 'ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು'. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇವರ "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ. ಶುಧ್ಧ ಸಾಹಿತ್ಯಿಕ ಮೌಲ್ಯವುಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಹಾಯುಧ್ಧ, ಹಾರುವ ತಟ್ಟೆಗಳು, ಮಹಾನದಿ ನೈಲ್ ಇತ್ಯಾದಿ.   

    ಅಲೆಮಾರಿಯ  ಅಂಡಮಾನ್ ತೇಜಸ್ವಿಯವರ ಅಂಡಮಾನ್ ಪ್ರವಾಸ ಕಥನ. ಈ ಕೃತಿಯು ಕನ್ನಡ ಪ್ರವಾಸ ಕಥನಗಳಲ್ಲೇ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು ", "ತಬರನ ಕಥೆ " ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. "ಕುಬಿ ಮತ್ತು ಇಯಾಲ " ಚಿತ್ರವು ರಾಷ್ಟ್ರ ಪ್ರಶಸ್ತಿ ಗಳಿಸಿತು.

    ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಿಜವಾದ ಹೆಸರಿನಲ್ಲಿ ಬರೆದ ಅಪರೂಪದ ಕವಿತೆಗಳಲ್ಲಿ ಕೆಳಗಿನದು ಒಂದು

.


ಯೂನಿವರ್ಸಿಟಿ ಕವಿ

ಲಿಪ್‌ಸ್ಟಿಕ್ಕು, ಲಿಂಗ್ವಿಸ್ಟಿಕ್ಕು,  
ಕೆಮಿಸ್ಟ್ರಿ, ಜ್ಯಾಮೆಟ್ರಿ,
ಯೂನಿವರ್ಸಿಟಿ ಪೊಯಿಟ್ರಿ.
ಅಹಹಹ, ವಹವ್ವಾ
ಎದೆಗುದಿತ ಎರೆಯಲೆರಕ
ಎಲಿಯಟ್ಟಿನ ಗೋಲಕ.
ಮೂವ್ವತ್ತರ ಹರೆಯದಲ್ಲು
ಮರೆಯದ ಭಂಗಿಮಾತ್ರ.
ಬಾಯ್ ಬೆರಳಿನ ಬಾಲಕ
ಮೂರ್ಖ-------
ಎಂದೆ ನಾನು ಯಾರಿಗೊ;
ಆ ಅವನೊಡನೆ ನನಗು ಕೂಡಿ
ಅಂದೇ ಬಿಡಿ ದಿsಕ್ಕಾರ:
ಬೆರಗು ಈಗ ಅರಗಿನ ಮನೆ!
ಉಸುರಲ್ಲಿ ಹತ್ತರ್ಥ ಹುಗಿಸಿ
ನಡೆಸುವೀ ಕುಸುರಿ ಕೆಲಸಕ್ಕೆ
ಹೇಸಿದ್ದೇನೆ--ಈಗ;
ಪೆಚ್ಚುಗೊಳಿಸುವುದರಲ್ಲೇನು
ಹೆಚ್ಚುಗಾರಿಕೆ ಇತ್ತು?
ವ್ಯರ್ಥ ಚತುರೋಕ್ತಿಗಳ
ಮೆಚ್ಚಿಕೊಂಡವರ ಕಂಡೆನಲ್ಲ!
ಕೀಲುಗೊಂಬೆಯ ಪಕ್ಕ
ಸಜೀವ ಕವನಕ್ಕೆ,
ನಾಡಿಯಾಡುವ ಜಾಡ ನೋಡಬಲ್ಲ
ಬಲ್ಲಿದ ಮಾತ್ರ ಸಿಕ್ಕಲಿಲ್ಲ!
ಪಂಚೇಂದ್ರಿಯ ಗ್ರಸ್ತ
ನಗು ಹಾಸ ಕೋಪತಾಪಪ್ರವೀಣಸ್ಥಿಮಿತ ಚಿತ್ತ;

(source: Compiled from different news papers and articles by Mallika Rajeev)


Sampige, P.O.Box 1201, Morrisville, NC 27560-8711