May Quiz: "ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವನಮ್ಮವ ಎಂದೆನಿಸಯ್ಯ" ಎಂದು ಸಹಬಾಳ್ವೆ, ಸಹಮತ, ಸೌಹಾರ್ದತೆ ತತ್ವವನ್ನು ಸಾರಿದ ಬಸವಣ್ಣ ನವರ ಜಯಂತಿ ಈ ತಿಂಗಳ 16 ರಂದು (ಮೇ 16 ,2010 ) . ಬಸವ ಜಯಂತಿ ಪ್ರಯುಕ್ತ ಈ ತಿಂಗಳ ರಸ ಪ್ರಶ್ನೆ. ಬಸವಣ್ಣ ನವರ ಜನ್ಮಸ್ಥಳ ಬಾಗೇವಾಡಿ(ಇಂಗಲೇಶ್ವರ) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇದೆ? April Quiz: "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು " ಎಂದು ಕನ್ನಡ ಜನತೆಯ ಮನ ಸಂತೋಷದಿಂದ ಕುಣಿವಂತೆ ಹಾಡಿದ ನಮ್ಮ ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಜನ್ಮದಿನ ಏಪ್ರಿಲ್ 24. ಆ ದಿವ್ಯಚೇತನ ಬದುಕಿದ್ದಿದ್ದರೆ ಈಗ 80 ವಸಂತಗಳಾಗಿರುತಿತ್ತು. ಅಸಂಖ್ಯ ಪ್ರಶಸ್ತಿಗಳನ್ನು ಪಡೆದ ಈ ನಟ ಹಾಗು ಗಾಯಕ ಕನ್ನಡ ಚಿತ್ರರಂಗದ ಮೇಲೆ ಬೀರಿರುವ ಪ್ರಭಾವ ಅಪರಿಮಿತ. ಇಂಥ ಕನ್ನಡದ ನಕ್ಷತ್ರಕ್ಕೆ ನಮನ ಹಾಗು ಈ ತಿಂಗಳ ರಸಪ್ರಶ್ನೆ: ಡಾ.ರಾಜಕುಮಾರ್ ಅವರು ಹಾಡಿದ ಯಾವ ಹಾಡಿಗೆ , ಉತ್ತಮ ಹಿನ್ನಲೆ ಗಾಯಕ - ರಾಷ್ಟ್ರ ಪ್ರಶಸ್ತಿ ಬಂದಿದೆ? ಮತ್ತು ಆ ಹಾಡು ಯಾವ ಚಲನಚಿತ್ರದ್ದು?? Answer: ಡಾ.ರಾಜಕುಮಾರ್ ಅವರು ಹಾಡಿದ "ನಾದಮಯ ಈ ಲೋಕವೆಲ್ಲ" ಹಾಡಿಗೆ , ಉತ್ತಮ ಹಿನ್ನಲೆ ಗಾಯಕ - ರಾಷ್ಟ್ರ ಪ್ರಶಸ್ತಿ ಬಂದಿದೆ. ಮತ್ತು ಆ ಹಾಡು "ಜೀವನಚೈತ್ರ" ಚಲನಚಿತ್ರದ್ದು. Winner: Veena Srikanth Rao. Thanks to all the participants for AprilQuiz. We encourage all members to participate every month. Prize Sponsored By: Rajeev Kotrannavar Answer the Quiz and win prizes every month.
Send your answers using the form below.
|

